Note: Finding it difficult to search your property, Call us on: +91 - 9379462388
ಕರ್ಪೂರು ಗ್ರಾಮ ಪಂಚಾಯಿತಿಯು ತಾಲ್ಲೂಕು ಕೇಂದ್ರದಿಂದ 4 ಕಿ.ಮೀ. ದೂರದಲ್ಲಿದ್ದು ಜಿಲ್ಲಾ ಕೇಂದ್ರದಿಂದ ಸುಮಾರು 35ಕಿಮೀ ದೂರದಲ್ಲಿದೆ ಕರ್ಪೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ 7 ಗ್ರಾಮಗಳಿದ್ದು 6 ಕಂದಾಯ ಗ್ರಾಮವನ್ನು ಹೊಂದಿದೆ ಸದರಿ ಪಂಚಾಯಿತಿಯಲ್ಲಿ ಒಟ್ಟು 16 ಚುನಾಯಿತ ಗ್ರಾ. ಪಂ. ಸದಸ್ಯರುಗಳಿರುತ್ತಾರೆ 2011ರ ಜನಗಣತಿಯ ಪ್ರಕಾರ ಪಂಚಾಯಿತಿಯಲ್ಲಿ 1448 ಕುಟುಂಬಗಳಿದ್ದು ಒಟ್ಟು ಜನಸಂಖ್ಯೆ 6338 ಇರುತ್ತದೆ ಇದರಲ್ಲಿ ಪುರುಷರು 3247ಮತ್ತು 3091 ಮಹಿಳೆಯರು ಇರುತ್ತಾರೆ 1773 ಪರಿಶಿಷ್ಟ ಜಾತಿ ಮತ್ತು 44 ಪರಿಶಿಷ್ಟ ವರ್ಗ ಜನರಿದ್ದಾರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಒಕ್ಕಲಿಗರು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಲಿಂಗಾಯುತರು ಮುಸ್ಲಿಮರು ಗೊಲ್ಲರು ಭಜಂತ್ರಿ ವಿಶ್ವಕರ್ಮ ತಮಿಳರು ಎಲ್ಲಾ ಕೋಮಿನವರು ಅನ್ಯೋನ್ಯತೆಯಿಂದ ವಾಸಿಸುತ್ತಿದ್ದಾರೆ ಗ್ರಾಮದಲ್ಲಿ ಅನೇಕ ದೇವಾಲಯಗಳಿದ್ದು ಜನ ಸಮುದಾಯವು ಧಾರ್ಮಿಕ ದೈವಭಕ್ತಿಯುಳ್ಳವರಾಗಿರುತ್ತಾರೆ ಕರ್ಪೂರು ಗ್ರಾಮ ಪಂಚಾಯಿತಿಯು 2900 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದ್ದು ರಾಗಿ ಮತ್ತು ತೋಟದ ಬೆಳೆಗಳನ್ನು ಪ್ರಮುಖ ಬೆಳೆಗಳನ್ನು ಬೆಳೆಯುತ್ತಾರೆ ಹಾಗೂ ಶೇ 20 ಭಾಗದಷ್ಟು ಜಮೀನು ಭೂ ಪರಿವರ್ತನೆ ಆಗಿರುತ್ತದೆ ಈ ಪಂಚಾಯಿತಿಯು 6 ಕೆರೆಗಳನ್ನು ಹೊಂದಿರುತ್ತದೆ ಸರ್ಕಾರಿ ಸ್ವತ್ತಿನಲ್ಲಿ ಸಾಮಾನ್ಯವಾಗಿ ಹೊಂಗೆ ಬಿದಿರು ನೇರಳೆ ಮಾವು ಹುಣಸೆ ಮುಂತಾದ ಮರಗಳು ಕಂಡುಬರುತ್ತದೆ ಪ್ರತಿ ಹತ್ತು ವರ್ಷಗಳ ಅವಧಿಯಲ್ಲಿ ಕನಿಷ್ಟ 4 ರಿಂದ 5 ವರ್ಷಗಳಲ್ಲಿ ಬರ ಪರಿಸ್ಥಿತಿ ಇದ್ದೇ ಇರುತ್ತದೆ ಅಂತರ್ಜಲ ಸುಧಾರಣ ಗುಣಮಟ್ಟದಿಂದ ಕೂಡಿದ್ದು ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಯೋಗ್ಯವಾಗಿರುತ್ತದೆ ನೀರಿನ ಲಭ್ಯತೆ ಪ್ರಮಾಣ ಸಾಧಾರಣವಾಗಿರುತ್ತದೆ.
The grievances are forwarded to concerned Officers at Karpur Gram Panchayat.
ನಿಮ್ಮ ಕುಂದುಕೊರತೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಲಾಗುತ್ತದೆ - ಕರ್ಪೂರು ಗ್ರಾಮ ಪಂಚಾಯಿತಿ ಆನೇಕಲ್ ತಾಲ್ಲೂಕ್, ಬೆಂಗಳೂರು ನಗರ ಜಿಲ್ಲೆ.